ಇಗೋ, ಮೂರನೆಯ ದಿನದಲ್ಲಿ ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದ ಒಬ್ಬ ಮನುಷ್ಯನು ಸೌಲನ ಬಳಿಯಿಂದಲೂ ಪಾಳೆಯಿಂದಲೂ ಹೊರಟು ದಾವೀ ದನ ಬಳಿಗೆ ಬಂದು ನೆಲದ ಮೇಲೆ ಬಿದ್ದು ಅವ ನಿಗೆ ವಂದಿಸಿದನು.
ದಾವೀದನು ಅವನಿಗೆ--ನಡೆದ ವರ್ತಮಾನವೇನು? ನೀನು ನನಗೆ ತಿಳಿಸು ಅಂದನು. ಅವನು--ಜನರು ಯುದ್ಧದಿಂದ ಓಡಿಹೋದರು; ಜನರಲ್ಲಿ ಅನೇಕರು ಸತ್ತುಬಿದ್ದರು; ಸೌಲನೂ ಅವನ ಮಗನಾದ ಯೋನಾ ತಾನನೂ ಸತ್ತರು ಅಂದನು.
ಅವನಿಗೆ ವರ್ತ ಮಾನ ಹೇಳಿದ ಯೌವನಸ್ಥನು--ನಾನು ಸುಮ್ಮನೆ ಗಿಲ್ಬೋವ ಬೆಟ್ಟದಲ್ಲಿ ಬಂದಿದ್ದೆನು. ಅಲ್ಲಿ ಇಗೋ, ಸೌಲನು ತನ್ನ ಈಟಿಯ ಮೇಲೆ ಆತುಕೊಂಡಿದ್ದನು. ಆಗ ಇಗೋ, ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು.
ನಾನು ಅವನಿಗೆ--ಅಮಾಲೇಕ್ಯನು ಎಂದು ಹೇಳಿದೆನು. ಅವನು ನನಗೆ -- ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು; ಯಾಕಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣ ವಾಗಿರುವದರಿಂದ ಸಂಕಟವು ನನ್ನನ್ನು ಹಿಡಿಯಿತು ಅಂದನು.
ಆದದರಿಂದ ಇವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ಕೈಯಲ್ಲಿದ್ದ ಕಡಗ ವನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದೆನು ಅಂದನು.
ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
ನನ್ನ ಸಹೋದರನಾದ ಯೋನಾತಾನನೇ, ನಾನು ನಿನ ಗೋಸ್ಕರ ಸಂಕಟಪಡುತ್ತೇನೆ; ನೀನು ನನಗೆ ಬಹಳ ಮನೋಹರನಾಗಿದ್ದೀ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.